
ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಕೃಷಿಸಂಜೀವಿನಿ ವೆಬ್ ಸೈಟ್ ಕಡೆಯಿಂದ ನಮಸ್ಕಾರಗಳು ನಿಮಗೆ ಈಗಾಗಲೇ ತಿಳಿದಿರುವಂತೆ ಕರ್ನಾಟಕ ಸರ್ಕಾರವು ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ ಎಲ್ಲಾ ರೈತರಿಗೆ ಸ್ಪಿಂಕ್ಲರ್ ವಿತರಣೆ ಮಾಡುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಸೂಕ್ಷ್ಮ ನೀರಾವರಿ ಯೋಜನೆ ಎಂದರೇನು?? ಮತ್ತು ಇದರ ಉದ್ದೇಶ.
ಕರ್ನಾಟಕ ಸರ್ಕಾರವು ಸೂಕ್ಷ್ಮ ಹನಿ ನೀರಾವರಿ ಯೋಜನೇ ಮಾಡಿರುವ ಉದ್ದೇಶ ತೋಟಗಾರಿಕೆ ಬೆಳೆಗಳಲ್ಲಿ ನೀರನ್ನು ಅತಿಯಾಗಿ ಬಳಸುತ್ತಿದ್ದಾರೆ ಇದನ್ನು ಕಡಿಮೆ ಮಾಡಲು ಈ ಯೋಜನೆಯನ್ನು ತಂದಿದ್ದಾರೆ. ಇದಕ್ಕೆ ಸರ್ಕಾರದಿಂದ 90 ಪರ್ಸೆಂಟ್ ಸಬ್ಸಿಡಿ ಅನ್ನು ಕೊಡಲಾಗುತ್ತಿದೆ.
ಈ ಯೋಜನೆಯನ್ನು ರೈತರು ಅಳವಡಿಸಿ ಕೊಳ್ಳುವುದರಿಂದ ಸುಮಾರು 50ರಿಂದ 70% ನೀರನ್ನು ಉಳಿತಾಯ ಮಾಡಬಹುದು. ಮತ್ತು ವಿದ್ಯುತ್ ಹಾಗೂ ಕೂಲಿ ವೆಚ್ಚವನ್ನು ಕೂಡ ಕಡಿಮೆ ಮಾಡಬಹುದು.

ರೈತರೇ ಈ ಯೋಜನೆಯನ್ನು ಪಡೆದುಕೊಳ್ಳಲು ನೀವು ಅರ್ಜಿ ಹೇಗೆ ಮತ್ತು ಎಲ್ಲಿ ಹಾಕಬೇಕು ಎಂಬುದರ ಬಗ್ಗೆ ಈ ಕೆಳಗೆ ತಿಳಿಯೋಣ ಬನ್ನಿ.
ರೈತರ ನೀವು ತಮ್ಮ ಫೋನಿನಲ್ಲೆ ಅರ್ಜಿಯನ್ನು ಹಾಕಬಹುದು, ಹಾಕುವುದರ ಬಗ್ಗೆ ಈ ಕೆಳಗೆ ನಾವೇ ತಿಳಿಸಿಕೊಡುತ್ತೇವೆ. ಮತ್ತು ನಿಮ್ಮ ಬಳಿ ಸ್ಮಾರ್ಟ್ ಫೋನ್ ಅಥವಾ ಅದರ ಬಗ್ಗೆ ಗೊತ್ತಿಲ್ಲವಾದಲ್ಲಿ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ. ಅಲ್ಲಿರುವಂತಹ ಆಫೀಸರ್ ಕೇಳಿ ಅರ್ಜಿಯನ್ನು ತೆಗೆದುಕೊಂಡು, ಅರ್ಜಿಯಲ್ಲಿ ಕೇಳಿರುವಂತಹ ನಿಮ್ಮ ಎಲ್ಲಾ ದಾಖಲಾತಿಗಳ ಜೊತೆಗೆ ಅರ್ಜಿಯನ್ನು ಹಾಕಿ ಬಂದರೆ, ನಿಮಗೆ ಸೀರಿಯಲ್ ಪ್ರಕಾರ ಸ್ಪಿಂಕ್ಲರ್ (sprinkler )ಅನ್ನೋ ವಿತರಣೆ ಮಾಡುತ್ತಾರೆ.
ಸಂಪೂರ್ಣ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ
ರೈತರೇ ನಿಮ್ಮ ಫೋನಿನಲ್ಲಿ ಅರ್ಜಿ ಹಾಕುವುದು ಹೇಗೆ??
ಹಂತ 01 :- https://kkisan.karnataka.gov.in/Home.aspx
ಮೊದಲು ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 02:- ನಂತರ ಅಲ್ಲಿ ಸರ್ಕಾರದ ಕೆ ಕಿಸಾನ್ ಕರ್ನಾಟಕ ಸರ್ಕಾರ ಕೃಷಿ ಇಲಾಖೆ ಎಂಬ ಮುಖ್ಯ ಪುಟವು ಓಪನ್ ಆಗುವುದು. ನಂತರ ಅದರ ಕೆಳಗೆ ಸೂಕ್ಷ್ಮ ನೀರಾವರಿ ಯೋಜನೆ ಎಂಬ ಲಿಂಕ್ ಕಾಣುವುದು ಅದರ ಮೇಲೆ ಕ್ಲಿಕ್ ಮಾಡಿ.
ಹಂತ 03 :- ನಂತರ ಅಲ್ಲಿ ಕೇಳುವ ನಿಮ್ಮ ಎಫ್ ಐಡಿ (FID ) ನಂಬರ ಹಾಕಿ ಗೆಟ್ ಡೀಟೇಲ್ಸ್ ( GET DETAILS ) ಎಂಬುದರ ಮೇಲೆ ಕ್ಲಿಕ್ ಮಾಡಿ.
ಹಂತ 04 :- ಒಂತರ ನಿಮ್ಮ ಮೊಬೈಲ್ ನಂಬರಿಗೆ ಒಂದು ಓಟಿಪಿ ಬರುತ್ತದೆ ಅದನ್ನು ಹಾಕಿದ ನಂತರ ವೆರಿಫೈ ಅಂಡ್ ಕಂಟಿನ್ಯೂ ಎಂಬ ಬಟನ್ ( verify and continue )ಅನ್ನು ಕ್ಲಿಕ್ ಮಾಡಿ.
ಹಂತ 05 :- ನಂತರ ರೈತರ ವಿವರ ಓಪನ್ ಆಗುವುದು, ಆಗ ಅಲ್ಲಿ ಅರ್ಜಿದಾರನ ಹೆಸರು ಮತ್ತು ತಂದೆ ಹೆಸರು ಮತ್ತು ಮೊಬೈಲ್ ನಂಬರ್ ಅನ್ನು ಹಾಕಿ.
ಹಂತ 06 :- ನಂತರ ನಿಮ್ಮ ಜಿಲ್ಲೆಯ ಮತ್ತು ತಾಲೂಕು ಹಾಗೂ ಅಲ್ಲಿಯ ವಿವರವನ್ನು ಸಂಪೂರ್ಣವಾಗಿ ಹಾಕಿ, ನಂತರ ನಿಮ್ಮ ಹೊಲದ ವಿವರನ್ನು ಕೇಳುತ್ತದೆ ನೀವು ಹಾಕಿದ ಬೆಳೆ, ಮತ್ತು ನೀರಾವರಿ ಪದ್ಧತಿಯನ್ನು ಕೇಳುತ್ತದೆ ಅಲ್ಲಿ ಸರಿಯಾಗಿ ನಿಮ್ಮ ವಿವರಗಳನ್ನು ಹಾಕಿದ ನಂತರ ಸಬ್ಮಿಟ್ ಮಾಡಿ.
ಹಂತ 07 :- ಇದೆಲ್ಲಾ ಆದ ಬಳಿಕ ನಿಮಗೆ ಒಂದು ಅಪ್ಲಿಕೇಶನ್ ಕಾಪಿ ( acknowledgement copy ) ಬರುತ್ತದೆ. ಅದುನ್ನ ನೀವು ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಕೊಡಿ, ಮತ್ತು ನಿಮ್ಮ ರೆಫರೆನ್ಸ್ ಗೆ ಒಂದು ನಿಮ್ಮ ಬಳಿ ಇಟ್ಟುಕೊಳ್ಳಿ.
ಈ ಸೂಕ್ಷ್ಮ ನೀರಾವರಿ ಯೋಜನೆಯ ಸುಮಾರು 90 ಪರ್ಸೆಂಟ್ ಸಬ್ಸಿಡಿ ಇರುವುದರಿಂದ, ಸಪ್ಲೈ ಕೂಡ ತುಂಬಾ ತಡವಾಗಿ ಬರುವುದು, ಅದರಿಂದ ರೈತರು ಕಾದು ತೆಗೆದುಕೊಂಡು ಹೋಗಬೇಕಾಗಿ ವಿನಂತಿ.
ನ್ಯಾನೊ ಡಿಎಪಿ ಬಳಸುವುದರಿಂದ ರೈತನಿಗೆ ಆಗುವ ಲಾಭಗಳೇನು ? ತಿಳಿಯಿರಿ🙏👇👇https://mahitisara.com/nanp-dap-has-been-released-to-market-know-the-benifits-of-nano-dap/agripedia/