
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಹಾಗೆ ಅಸ್ಥಿರತೆಗೆ ಇನ್ನೊಂದು ಹೆಸರೇ ಕೃಷಿ . ಈ ಕ್ಷೇತ್ರದಲ್ಲಿರುವಷ್ಟು ಚಂಚಲತೆ, ಆತಂಕ ಬೇರಾವು ಕ್ಷೇತ್ರದಲ್ಲೂ ಕೂಡ ಇಲ್ಲ. ಸರಕಾರದ ನೀತಿಗಳು, ದಲ್ಲಾಳಿಗಳು, ಮಾರುಕಟ್ಟೆಯಲ್ಲಿನ ಲೋಪಗಳಿಂದಾಗಿ ಇಂದಿಗೂ ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ, ಈರುಳ್ಳಿ ಬೆಲೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ನೂರು ರೂ. ದಾಟಿದ್ದರೂ ರೈತರಿಗೇನೂ ಬಂಪರ್ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳೇ ಹೆಚ್ಚು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ರೈತರು ಲಭ್ಯ ಇರುವ ತಂತ್ರಜ್ಞಾನ ಬಳಸಿಕೊಂಡು ತಮ್ಮ ಉತ್ಪನ್ನಗಳನ್ನು ಸೂಕ್ತ ಸಮಯದಲ್ಲಿ ಮಾರಾಟ ಮಾಡಿ ಲಾಭ ಗಳಿಸಬಹುದು.
ರೈತರಿಗೆ ನೆರವಾಗುವ ಮೊಬೈಲ್ ಅಪ್ಲಿಕೇಶನ್ಗಳು.
ಇದರ ಜತೆಗೆ, ಹವಾಮಾನ, ರಸಗೊಬ್ಬರ, ಬೆಳೆಗಳ ಬಗ್ಗೆ ಪೂರ್ಣವಾದ ಮಾಹಿತಿ ಇದ್ದರೆ ಲಾಭದಾಯಕ. ಹಾಗಾಗಿ, ರೈತರಿಗೆ ನೆರವಾಗುವ ನಿಟ್ಟಿನಲ್ಲಿಅನೇಕ ಆ್ಯಪ್‌ಗಳಿವೆ. ಕೆಲವೊಂದು ಆ್ಯಪ್‌ಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಿಡುಗಡೆ ಮಾಡಿದ್ದರೆ, ಮತ್ತೊಂದಿಷ್ಟು ಆ್ಯಪ್‌ಗಳನ್ನು ಕೃಷಿ ಸಂಬಂಧಿಸಿದ ಸಂಸ್ಥೆಗಳು ನಿರ್ವಹಣೆ ಮಾಡುತ್ತಿವೆ. ರೈತರು ಈ ಮಾಹಿತಿಯನ್ನು ಬಳಸಿಕೊಂಡು ಅತ್ಯುತ್ತಮ ಕೃಷಿ ಮಾಡಬಹುದು, ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆಯನ್ನು ಪಡೆದುಕೊಳ್ಳಬಹುದು. ಅಂಥ ಆ್ಯಪ್ ಬಗ್ಗೆ ಇಲ್ಲಿದೆ ಮಾಹಿತಿ.
ಪ್ಲಾಂಟಿಕ್ಸ್ : ಇದು ಒಂದು ರೈತರು, ಕೃಷಿ ಅಧಿಕಾರಿಗಳು ಮತ್ತು ತೋಟಗಾರರಿಗಾಗಿ ಇರುವ ಮೊಬೈಲ್ ಬೆಳೆ ಸಲಹಾ ಅಪ್ಲಿಕೇಶನ್ ಆಗಿದೆ. ಪ್ಲಾಂಟಿಕ್ಸ್ ಅನ್ನು ಬರ್ಲಿನ್ ಮೂಲದ ಎಐ ಸ್ಟಾರ್ಟ್ಅಪ್ PEAT GmbH ಅಭಿವೃದ್ಧಿಪಡಿಸಿದೆ. ಕೀಟ ಹಾನಿ, ಸಸ್ಯ ರೋಗಗಳು ಮತ್ತು ಬೆಳೆಗಳ ಮೇಲೆ ಪರಿಣಾಮ ಬೀರುವ ಪೋಷಕಾಂಶಗಳ ಕೊರತೆಯನ್ನು ಕಂಡು ಹಿಡಿದು ಮತ್ತು ಅದಕ್ಕೆ ಅನುಗುಣವಾದ ಚಿಕಿತ್ಸಾ ಕ್ರಮಗಳನ್ನು ನೀಡುವುದಾಗಿ ಅಪ್ಲಿಕೇಶನ್ ಹೇಳಿಕೊಡುತ್ತದೆ. ಸಸ್ಯ ಆರೋಗ್ಯ ಸಮಸ್ಯೆಗಳನ್ನು ಚರ್ಚಿಸಲು ಬಳಕೆದಾರರು ಆನ್‌ಲೈನ್ ಸಮುದಾಯದಲ್ಲಿ ಭಾಗವಹಿಸಬಹುದು. ಅಲ್ಲಿ ಅವರು ವಿಜ್ಞಾನಿಗಳು, ರೈತರು ಮತ್ತು ಸಸ್ಯ ತಜ್ಞರನ್ನು ಸಂಪರ್ಕಿಸಿ ಮಾಹಿತಿಯನ್ನು ತಿಳಿದುಕೊಳ್ಳ ಬಹುದು. ರೈತರು ಸ್ಥಳೀಯ ಹವಾಮಾನವನ್ನು ನೋಡಬಹುದು, ವರ್ಷದುದ್ದಕ್ಕು ಉತ್ತಮ ಕೃಷಿ ಸಲಹೆಯನ್ನು ಪಡೆಯಬಹುದು ಮತ್ತು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದಾದರೂ ರೋಗ ಹರಡಿದರೆ ಅದರ ಕುರಿತು ರೋಗ ಎಚ್ಚರಿಕೆ ಕ್ರಮಗಳನ್ನು ಅಳವಡಿಕೆ ಮಾಡಿಕೊಳ್ಳಬಹುದು. ಈ PEAT GmbH 2015 ರಲ್ಲಿ ಪ್ಲಾಂಟಿಕ್ಸ್ ಅಪ್ಲಿಕೇಶನ್ ಅನ್ನು ಆರಂಬಿಸಿತ್ತು . ಏಪ್ರಿಲ್ 2020 ರಲ್ಲಿ PEAT ಸ್ವಿಸ್-ಇಂಡಿಯನ್ ಸ್ಟಾರ್ಟ್ಅಪ್ ಆದ ಸೇಲ್ಸ್‌ಬೀ ಅನ್ನು ಸ್ವಾಧೀನಪಡಿಸಿಕೊಂಡಿತು. ಅಷ್ಟೇ ಅಲ್ಲದೆ ಕರ್ನಾಟಕದ ವೃತ್ತಪತ್ರಿಕೆಗಳಾದ ಪ್ರಜಾವಾಣಿ , ಉದಯವಾಣಿಗಳಲ್ಲೂ , ಇದರ ಬಗ್ಗೆ ಲೇಖನಗಳು ಬಂದಿವೆ. ಇದಕ್ಕೆ ವಿಶ್ವಸಂಸ್ಥೆಯಿಂದ ಸಿಬಿಐಟಿ ಇನ್ನೋವೇಶನ್ ಪ್ರಶಸ್ತಿ ಮತ್ತು ಯುಎಸ್ಐಐಡಿ ಡಿಜಿಟಲ್ ಸ್ಮಾರ್ಟ್ ಫಾರ್ಮಿಂಗ್ ಪ್ರಶಸ್ತಿ ಮತ್ತು ವರ್ಲ್ಡ್ಸ್ ಸಮಿಟ್ ಪ್ರಶಸ್ತಿ ಕೂಡ ದೊರೆತಿದೆ.
ಹೆಸರು ಸೂಚಿಸುವಂತೆ ಇದು ಬೆಳೆ ವಿಮೆಗೆ ಸಂಬಂಧಿಸಿದ ಮಾಹಿತಿ ಒದಗಿಸುವ ಆ್ಯಪ್. ಅಧಿಸೂಚಿತ ಬೆಳೆಗಳ ಇನ್ಶೂರೆನ್ಸ್ ಪ್ರಿಮೀಯಂ ಅನ್ನು ಲೆಕ್ಕ ಹಾಕಲು ಈ ಆಪ್ ನೆರವಾಗುತ್ತದೆ. ಕಟ್-ಆಫ್ ಡೇಟ್ಸ್ ಮತ್ತು ಬೆಳೆ ಹಾಗೂ ಸ್ಥಳದ ಬಗ್ಗೆ ಕಂಪನಿ ಸಂಪರ್ಕದ ಬಗ್ಗೆ ಮಾಹಿತಿ ನೀಡುತ್ತದೆ.
ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಅನ್ನು ಒತ್ತಿ
https://play.google.com/store/apps/details?id=com.peat.GartenBank&hl=kn&referrer=utm_medium%3Dweb_kn%26utm_campaign%3Dhomepagetops_kn%26utm_content%3Dkn%26utm_term%3Dhomepagetops%26utm_source%3Dweb_landingpage_kn
Crop insಉತ್ಪನ್ನ ಬೆಳೆ ವಿಮೆ ಗ್ರಾಮೀಣ ವಿಮೆಯಲ್ಲಿ ಮುಖ್ಯವಾದದ್ದು, ಇದರಲ್ಲಿ ಕ್ರುಷಿ ಉತ್ಪನ್ನಗಳ, ಬೆಲೆ ಮತ್ತು ಆದಾಯದ ಅಪಾಯಗಳನ್ನು ಖಚಿತಪಡಿಸಲಾಗಿದೆ. ಈ ಅಪ್ಲಿಕೇಶನ್ ಇಂದ ರೈತ ತನ್ನ ಮೊಬೈಲ್ ನಲ್ಲಿ ವಿಮೆಯ ಬೆಲೆಯನ್ನು ತಿಳಿದುಕೊಳ್ಳಲು ಸಹಯವಾಗುತ್ತದೆ ಉತ್ತಮ ಪ್ರಮಾಣದ ಉತ್ಪನ್ನವನ್ನು ಪಡೆಯಲು ಹೋದರೆ, ಕೃಷಿ ಭೂಮಿಗಳ ಬೆಲೆ ಮತ್ತು ಆದಾಯದ ಅಗತ್ಯವಿದ್ದರೆ ಅವರನ್ನು ಬೆಳೆ ವಿಮೆ ಅಡ್ಡಿಯಲ್ಲಿ ವಿಮೆ ಕಂಪನಿಗಳು ಪರಿಹಾರ ಮಾಡುತ್ತದೆ. ಬೆಳೆ ವಿಮೆ ರೈತರು ಸಾಕಿರುವವರು ಮತ್ತು ಇತರ ಉತ್ಪಾದಕರು, ಆಲಿಕಲ್ಲು, ಬರ, ಅತಿವೃಷ್ಟಿ, ಅನಾವೃಷ್ಟಿ, ಮತ್ತು ಪ್ರವಾಹ ಮುಂತ್ತಾದ ಪ್ರಾಕ್ರುತಿಕ ವಿಕೋಪಗಳ ಮೂಲಕ ತಮ್ಮ ಬೆಳೆಗಳನ್ನು ನಷ್ಟವಾದರು ಮತ್ತು ಕೃಷಿ ಪದಾರ್ಥಗಳ ಬೆಲೆಗಳು ಕುಸಿತ ಕಾರಣ ಬರುವ ಆದಾಯದ ನಷ್ಟದಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುವುದು. ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಅನ್ನು ಒತ್ತಿ
http://mkisan.gov.in/downloadmobileapps.aspx
Crop insurance/ ಬೆಳೆ ಸಮೀಕ್ಷೆ ರಾಜ್ಯ ಸರಕಾರವು ಪ್ರಪ್ರಥಮ ಬಾರಿಗೆ ದೇಶಾದ್ಯಂತ ಬೆಳೆಸಮೀಕ್ಷೆ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದರು. ಈಗಾಗಲೆ ಅರ್ದ ಪ್ರಮಾಣದ ರೈತರು ತಮ್ಮ ಬೆಳೆಗಳನ್ನು ಸಮೆಕ್ಷೆ ಮಾಡಿದ್ದಾರೆ. ರೈತರು ಬೆಳೆ ಗೆ ಬರುವ ರೋಗ, ಅತಿವೃಷ್ಟಿ, ಅನಾವೃಷ್ಟಿ ಮುಂತಾದ ಕಾರಣದಿಂದ ಬಹಳ ನಷ್ಟ ಅನುಭವಿಸುತ್ತದ್ದಾರೆ.
ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಜಿ.ಪಿ.ಎಸ್ ಆಧಾರಿತ ಮೊಬೈಲ್ ಆ್ಯಪ್ ಬಳಸಿ ಸಮೀಕ್ಷೆ ನಡೆಸಲು ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದ್ದು, ಈ ವರ್ಷದ ಹಿಂಗಾರು ಹಂಗಾಮಿನಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು “Farmer Rabi Crop Survey Karnataka -2021-22” ಎಂಬ ಅಪ್ಲಿಕೇಶನ್ ದಾಖಲಿಸಬಹುದಾಗಿದೆ.
ಸಮೀಕ್ಷೆ ಮೂಲಕ ಸಂಗ್ರಹಿಸಿದ ಬೆಳೆ ಮಾಹಿತಿಯನ್ನು ಮೇಲ್ವಿಚಾರಕರ ಮೂಲಕ ಅನುಮೋದನೆ ಮಾಡಿದ ನಂತರ, ಈ ಮಾಹಿತಿಯನ್ನು ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗಾಗಿ, ಬೆಳೆ ವಿಮೆ ಯೋಜನೆಗಾಗಿ, ಪ್ರಕೃತಿ ವಿಕೋಪದಿಂದಾದ ಬೆಳೆ ನಷ್ಟ ಪರಿಹಾರ ನೀಡುವ ಸಮಯದಲ್ಲಿ ಉಪಯೋಗಿಸಲಾಗುತ್ತದೆ.
ಸರಕಾರವು ರೈತರಿಗೆ ಸಹಾಯ ಮಾಡಲೆಂದು ಈ ಅಪ್ಲಿಕೇಶನ್ ಅನ್ನು ಜಾರಿಗೆ ತಂದಿದ್ದಾರೆ. ರೈತರು ಈ ಅಪ್ಲಿಕೇಶನ್ ಮೂಲಕ ತಮ್ಮ ತಮ್ಮ ಬೆಳೆಗಳನ್ನು ತಾವೆ ಸಮೀಕ್ಷೆ ಮಾಡಬೇಕು , ಹಾಗೆನಾದರು ನಿಜವಾಗಿಯೂ ಬೆಳೆ ಹಾನಿ ಆದಲ್ಲಿ ಸರಕಾರವು ಬೆಳೆ ಹಾನಿ ದರವನ್ನು ರೈತರ ಖಾತೆಗೆ ಜಮಾ ಮಾಡಲು ಕೆಲಸ ಕೈಗೊಲ್ಲುತ್ತದೆ.
.ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಅನ್ನು ಒತ್ತಿ
https://play.google.com/store/apps/details?id=com.csk.Khariffarmer22_23.cropsurvey
ಕಿಸಾನ್ ಸುವಿಧಾ
ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 2016 ರಲ್ಲಿ ಚಾಲನೆ ನೀಡಿದರು. ಪ್ರಸಕ್ತ ಹವಾಮಾನ ಮತ್ತು ಮುಂದಿನ ಐದು ದಿನಗಳ ಹವಾಮಾನ ಮಾಹಿತಿಯನ್ನು ಒದಗಿಸುತ್ತದೆ. ಹತ್ತಿರದ ಪಟ್ಟಣಗಳಲ್ಲಿರುವ ಧಾರಣೆ ರಸಗೊಬ್ಬರು, ಬೀಜ, ಯಂತ್ರೋಪಕರಣಗಳ ಮಾಹಿತಿ ನೀಡುತ್ತದೆ. ದೇಶದ ನಾನಾ ಭಾಷೆಗಳಲ್ಲಿ ಈ ಆ್ಯಪ್ ಮಾಹಿತಿಯನ್ನು ನೀಡುತ್ತದೆ.ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಅನ್ನು ಒತ್ತಿ
https://play.google.com/store/apps/details?id=com.kisan.suvidha
ಅಗ್ರಿ ಮಾರ್ಕೆಟ್
ಕ್ರಾಪ್ ಇನ್ಶೂರೆನ್ಸ್ ಆ್ಯಪ್ ಜತೆಗೆ ಅಗ್ರಿ ಮಾರ್ಕೆಟ್ ಆ್ಯಪ್ ಅನ್ನು ಭಾರತ ಸರಕಾರ ಬಿಡುಗಡೆ ಮಾಡಿತ್ತು. ಬೆಳೆಗಳ ಧಾರಣಿ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುವ ಉದ್ದೇಶದಿಂದಲೇ ಇದನ್ನು ಅಭಿವೃದ್ಧಿಪಡಿಸಲಾಗಿದೆ. ರೈತರು ತಮ್ಮ ಸುತ್ತಲಿನ ಅಂದರೆ 50 ಕಿ.ಮೀ. ವ್ಯಾಪ್ತಿಯ ಮಾರುಕಟ್ಟೆಯಲ್ಲಿರುವ ಬೆಳೆಗಳ ಧಾರಣೆಯನ್ನು ಇದರ ಮೂಲಕ ತಿಳಿಯಬಹುದು.ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಅನ್ನು ಒತ್ತಿ
https://play.google.com/store/apps/details?id=com.globalagricentral
ಉಳವಾನ
ಈ ಆ್ಯಪ್‌ನಿಂದ ರೈತರು 9 ರೀತಿಯ ಸೇವೆಗಳನ್ನು ಪಡೆಯಬಹುದಾಗಿದೆ. ಬೆಳೆ ವಿಮೆ, ಕೃಷಿ ಸಬ್ಸಿಡಿ, ಕೃಷಿ ಉಪಕರಣಗಳು ಮತ್ತು ಸಂಬಂಧಿಸಿದ ಮೂಲಭೂತ ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಆ್ಯಪ್ ಒದಗಿಸುತ್ತದೆ. ಹಾಗೆಯೇ, ಮುಂದಿನ ನಾಲ್ಕು ದಿನಗಳವರೆಗಿನ ಹವಾಮಾನ ಮಾಹಿತಿಯನ್ನು ಈ ಆ್ಯಪ್ ಒದಗಿಸುತ್ತದೆ.ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಅನ್ನು ಒತ್ತಿ https://play.google.com/store/apps/details?id=agri.tnagri
ಪುಸಕೃಷಿ
ಭಾರತೀಯ ಕೃಷಿ ಸಂಸೋಧನಾ ಸಂಸ್ಥೆ(ಐಎಆರ್‌ಐ) ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳು ಮತ್ತು ರೈತರಿಗೆ ನೆರವಾಗುವ ಇತರೆ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಎಐಆರ್‌ಐ ಅಭಿವೃದ್ಧಿಪಡಿಸಿರುವ ನಾನಾ ಮಾದರಿಯ ಬೆಳೆಗಳು, ಸಂಪನ್ಮೂಲಗಳ ರಕ್ಷಣೆ, ಸುಧಾರಿತ ಕೃಷಿ ಪದ್ಧತಿಗಳು, ಕೃಷಿ ಯಂತ್ರೋಪಕರಣಗಳು ಬಗ್ಗೆ ಮಾಹಿತಿ ಒದಗಿಸುತ್ತದೆ.ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಅನ್ನು ಒತ್ತಿ
https://play.google.com/store/apps/details?id=com.globalagricentral
ಸ್ಪ್ರೆ ಗೈಡ್
ಕ್ರಿಮಿನಾಶಕ ಹಾಗೂ ಇತರ ರಾಸಾಯನಿಕ ದ್ರಾವಣಗಳನ್ನು ಬೆಳೆಗಳಿಗೆ ಸಿಂಪಡಿಸುವುದು ಕೃಷಿಯ ಒಂದು ಭಾಗವಾಗಿದೆ. ಆದರೆ, ಈ ದ್ರಾವಣಗಳನ್ನು ಹೇಗೆ, ಎಷ್ಟು ಪ್ರಮಾಣದಲ್ಲಿ ಬೆರೆಸಬೇಕು ಎಂಬ ಮಾಹಿತಿ ಬಹಳಷ್ಟು ರೈತರಿಗೆ ಇರುವುದಿಲ್ಲ. ಈ ಮಾಹಿತಿಯ ಕೊರತೆಯನ್ನು ಈ ಆ್ಯಪ್ಪ್ ನೀಗಿಸುತ್ತದೆ. ನೀವು ಮಾಡಿದ ಪ್ರಯೋಗಗಳ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇತರ ರೈತರೊಂದಿಗೆ ಹಂಚಿಕೊಳ್ಳಬಹುದು.ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಅನ್ನು ಒತ್ತಿ https://play.google.com/store/apps/details?id=com.pentair.spray
ಮಷಿನರಿ ಗೈಡ್
ಹೆಸರೇ ಸೂಚಿಸುವಂತೆ ಇದು ಕೃಷಿ ಉಪಕರಣಗಳಿಗೆ ಸಂಬಂಧಿಸಿದ ಆ್ಯಪ್‌ಪ್. ಮಣ್ಣು ಸಾಗುವಳಿ, ಬಿತ್ತನೆ, ಗೊಬ್ಬರ, ನಾಟಿ, ಫಲೀಕರಣ, ಕೀಟ ನಿಯಂತ್ರಣ, ವಿಂಗಡಣೆ, ಕೊಯ್ಲು, ನೀರಾವರಿ ಮುಂತಾದ ವಿವಿಧ ಉದ್ದೇಶಗಳಿಗಾಗಿ ಕೃಷಿ ಉಪಕರಣಗಳನ್ನು ಬಳಸಲು ರೈತರಿಗೆ ಈ ಆ್ಯಪ್ ನೆರವು ನೀಡುತ್ತದೆ.ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಅನ್ನು ಒತ್ತಿ
https://play.google.com/store/apps/details?id=hu.zbertok.machineryguide
ಸಿಸಿಮೊಬೈಲ್ ಅಪ್ಲಿಕೆಶನ
ಈ ಆ್ಯಪ್ ಕೂಡ ರೈತರ ಅಭ್ಯುದಯದ ಧ್ಯೇಯದೊಂದಿಗೆ ಆರಂಭವಾಗಿದೆ. ತಾಪಮಾನ, ತೇವಾಂಶ, ಗಾಳಿಯ ವೇಗ ಸೇರಿದಂತೆ ಇತರೆ ಮಾಪನಗಳ ಬಗ್ಗೆ ತಿಳಿದುಕೊಳ್ಳಬಹುದು. ಇದು ಬೆಳೆಗಳೊಂದಿಗೆ ರೈತರನ್ನು ಬೆಸೆಯುತ್ತದೆ. ಆ್ಯಪ್ ಒದಗಿಸುವ ಮಾಪನ ಮಾಹಿತಿಯನ್ನು ರೈತರು ವಾರ, ಪಾಕ್ಷಿಕ ಅಥವಾ ತಿಂಗಳಿಗೊಮ್ಮೆ ಹೋಲಿಕೆ ಮಾಡಿಕೊಳ್ಳಬಹುದು. ಜತೆಗೆ ಬೆಳೆಗಳ ಮಾಹಿತಿಯನ್ನು ಪಡೆದುಕೊಳ್ಳಬಹುದು. ಎಸ್‌ಎಂಎಸ್ ಅಥವಾ ಇ ಮೇಲ್ ಮೂಲಕ ಅಲರ್ಟ್ ಪಡೆಯಬಹುದು.ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಅನ್ನು ಒತ್ತಿ https://play.google.com/store/apps/details?id=com.root.ccmobile
ಎಜಿ ಮೊಬೈಲ್
ರೈತರಿಗೆ ಮತ್ತು ಕೃಷಿ ವೃತ್ತಿಪರರಿಗೆ ಸರಕು ಮಾರುಕಟ್ಟೆ ಮಾಹಿತಿಯನ್ನು ಒದಗಿಸುವ ಮತ್ತು ಕೃಷಿ ಸುದ್ದಿಗಳನ್ನು ಬಿತ್ತರಿಸಲು ಅನುವಾಗುವಂತೆ ಈ ಆ್ಯಪ್‌ಪ್ ವಿನ್ಯಾಸಗೊಳಿಸಲಾಗಿದೆ. ರೈತರು ಸರಕು ಮಾರುಕಟ್ಟೆಯ ಮಾಹಿತಿ ಸೇರಿದಂತೆ ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಅನ್ನು ಒತ್ತಿ
https://play.google.com/store/apps/details?id=com.agmobile.app
ಇಫ಼್ಕೊ ಕಿಸಾನ್
ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ ಆಪರೇಟಿವ್ ಲಿ. ಈ ಆ್ಯಪ್ ಅನ್ನು ನಿರ್ವಹಣೆ ಮಾಡುತ್ತದೆ. ಬೆಳೆಗಳು, ಕೃಷಿ ಋತುಮಾನಗಳು, ಕೃಷಿ ಕ್ಷೇತ್ರ ಸಿದ್ಧತೆ, ನೀರು ನಿರ್ವಹಣೆ, ರೋಗ ನಿಯಂತ್ರಣ, ಕೃಷಿ ಪೂರ್ವ ಸಿದ್ಧತೆಗಳು ಸೇರಿದಂತೆ ಇತರೆ ಎಲ್ಲಮಾಹಿತಿಯನ್ನು ಬಳಕೆದಾರರು ಕೃಷಿ ತಜ್ಞರು, ವಿಜ್ಞಾನಿಗಳಿಂದ ಪಡೆಯಲು ಈ ಆ್ಯಪ್ ನೆರವು ನೀಡುತ್ತದೆ.ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಅನ್ನು ಒತ್ತಿ https://play.google.com/store/apps/details?id=com.IFFCOKisan
Source: vijayakarnataka.com