Spread the love

2020-21 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆಯನ್ನು ಮಾಡಿಸಿದಂತಹ ರೈತರುಗಳ ಪೈಕಿ ಕೆಲವು ರೈತರ ಪ್ರಸ್ತಾವನೆಗಳು ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆಯಾಗದೆ ವಿಮಾ ಸಂಸ್ಥೆಯಿಂದ ತಿರಸ್ಕೃತಗೊಂಡಿವೆ. ತಿರಸ್ಕೃತಗೊಂಡ ರೈತರ ಯಾದಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘಗಳಲ್ಲಿ ಪ್ರದರ್ಶಿಸಲಾಗಿದೆ. ವಿಮೆ ಅರ್ಜಿಗಳು ತಿರಸ್ಕೃತಗೊಂಡ ಬಗ್ಗೆ ಸಂಬಂಧಪಟ್ಟ ರೈತರ ಆಕ್ಷೇಪಣೆಯಿದ್ದಲ್ಲಿ ಈ ಕೆಳಗಿನ ಯಾವುದಾದರೂ ಒಂದು ಸೂಕ್ತ ದಾಖಲಾತಿಯನ್ನು 15 ದಿನಗಳ ಒಳಗಾಗಿ (ದಿ:15-12-2022) ಸಲ್ಲಿಸಲು ಕೋರಲಾಗಿದೆ.

ಮುಂದುವರೆದು ರೈತರಿಂದ ಯಾವುದೆ ಆಕ್ಷೇಪಣಾ ಅರ್ಜಿಗಳು ಸ್ವೀಕೃತವಾಗದೆ ಇದ್ದಲ್ಲಿ ಮಾರ್ಗಸೂಚಿ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಂ.ಎಸ್ ಕುಲಕರ್ಣಿ ಸಹಾಯಕ ಕೃಷಿ ನಿರ್ದೇಶಕರು ಮುಂಡಗೋಡ ಪ್ರಕಟಣೆ ಹೊರಡಿಸಿದ್ದಾರೆ.

ಬೆಳೆ ವಿಮೆ ತಿರಸ್ಕೃತಗೊಂಡ ಅರ್ಜಿಗಳನ್ನು ಸರಿಪಡಿಸಿಕೊಳ್ಳಲು ಕೃಷಿ ಇಲಾಖೆಯಿಂದ ರೈತರಿಗೆ ಸಲಹೆಗಳು:

• 2020-21 ರ ಪಹಣಿ ಪತ್ರಿಕೆಯಲ್ಲಿ ವಿಮೆಗೆ ನೊಂದಾಯಿಸಿದ ಬೆಳೆ ನಮೂದಾಗಿರಬೇಕು.

• ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ
ರಶೀದಿಯನ್ನು ಒದಗಿಸುವುದು. ಇದನ್ನು
ಪರಿಶೀಲಿಸಲಾಗುವುದು.

• ವಿಮೆಗೆ ನೊಂದಾಯಿಸಿದ ಬೆಳೆಯ ಉತ್ಪನ್ನವನ್ನು APMC ಮಾರುಕಟ್ಟೆಗೆ ಮಾರಾಟ ಮಾಡಿದ್ದಲ್ಲಿ ದಾಖಲೆ ಒದಗಿಸುವುದು. ಇದನ್ನು ಪರಿಶೀಲಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ/ ಬೆಳೆ ವಿಮೆ ಪ್ರಿಮಿಯಮ್ ಪಾವತಿಸಿದ ಸಂಘಗಳನ್ನು ಸಂಪರ್ಕಿಸಲು ಕೋರಿದೆ.
ಹೆಚ್ಚಿನ
ಹಂತ-1
ಮೊದಲಿಗೆ ಈ
https://play.google.com/store/apps/details? id=com.crop.offcskharif_2021

ಲಿಂಕ್ ಮೇಲೆ ಒತ್ತಿ ಮೊಬೈಲನಲ್ಲಿ “ಬೆಳೆ ದರ್ಶಕ್” ಅಪ್ಲಿಕೇಶನ್ ಡೌಗ್ಲೋಡ್ ಮಾಡಿಕೊಳಬೇಕು.

ಹಂತ-2
“ವರ್ಷ: 2022-23”, “ಋತು: ಮುಂಗಾರು, “ಜಿಲ್ಲೆ-ತಾಲ್ಲೂಕು-ಹೋಬಳಿ-ಗ್ರಾಮ” ಅಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ “ಜಮೀನಿನ ಸರ್ವೆ ನಂಬರ್” ಹಾಕಿ ವಿವರ ಪಡೆಯಿರಿ ಮೇಲೆ ಒತ್ತಿ.

ಹಂತ-3
“ಸರ್ವೆ ನಂಬರ್/ಹಿಸ್ಸಾವಿವರ”ದಲ್ಲಿ ನಿಮ್ಮ “ಸರ್ವೆ ನಂಬರ್” ಆಯ್ಕೆ ಮಾಡಿಕೊಳ್ಳಬೇಕು, ನಂತರ “ಮಾಲೀಕರ ವಿವರದ” ಮೇಲೆ ಒತ್ತಿ ನಿಮ್ಮ ವಿವರ ಆಯ್ಕೆ ಮಾಡಿ ಸಮೀಕ್ಷೆ ವಿವರಗಳನ್ನು ಪಡೆಯಿರಿ ಮೇಲೆ ಒತ್ತಿ, ನಂತರ ಕೆಳಗಡೆ “ಸಮೀಕ್ಷೆಗಾರರ” ಹೆಸರು ಬರುತ್ತದೆ ಅದರ ಮೇಲೆ ಒತ್ತಿ ಬೆಳೆ ವಿವರ ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿ.

ಹಂತ-4
ಇಲ್ಲಿ ನಿಮ್ಮ ಬೆಳೆ ಸಮೀಕ್ಷೆ ವಿವರ ಗೋಚರಿಸುತ್ತದೆ. ನಿಮ್ಮ ಜಮೀನಿನಲ್ಲಿ ನೀವು ಬೆಳೆದಿರುವ ಬೆಳೆ ವಿವರ ತೋರಿಸುತ್ತದೆ, ವಿವರ ತಪ್ಪಿದಲ್ಲಿ “ಆಕ್ಷೇಪಣೆ ಇದೆ” ಆಯ್ಕೆ ಮೇಲೆ ಒತ್ತಿ “ಆಕ್ಷೇಪಕರ ಹೆಸರು” ಮತ್ತು “ಮೊಬೈಲ್ ಸಂಖ್ಯೆ” ಇತರೆ ವಿವರ ನಮೂದಿಸಿ ಆಕ್ಷೇಪಣೆ ಸಲ್ಲಿಸಬವುದು. ಇದಾದ ನಂತರ ಮರು ಸಮೀಕ್ಷೆ ಕೈಗೊಂಡು ಸರಿಯಾದ ಬೆಳೆ ವಿವರ ದಾಖಲಾತಿ ಮಾಡಲಾಗುತ್ತದೆ.

ಬೆಳೆ ದರ್ಶಕ್ ಅಪ್ಲಿಕೇಶನ್ ಕಾರ್ಯ ವಿಧಾನ ತಿಳಿಯಲು ಇಲ್ಲಿ ಒತ್ತಿ.

ನಮೂದಿಸಿದ ಬೆಳೆ ವಿವರ ಸರಿಯಿಲ್ಲವೆಂದಾದರೆ ತಮ್ಮ ಆಕ್ಷೇಪಣೆಯನ್ನು “ಬೆಳೆ ದರ್ಶಕ್” ಮೊಬೈಲ್ ಅಪ್ ಮೂಲಕ ಮತ್ತು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಲೆಕ್ಕಾಧಿಕಾರಿ/ತಾಲ್ಲೂಕು ಕಚೇರಿಯಲ್ಲಿ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಬವುದು.

Leave a Reply

Your email address will not be published. Required fields are marked *