
ಎಲ್ಲ ರೈತ ಬಾಂಧವರಿಗೆ ನನ್ನ ನಮಸ್ಕಾರಗಳು, ಈ ಲೇಖನದಲ್ಲಿ ನಾವು ಹನಿ ನೀರಾವರಿಗೆ ನೀಡುವಂತ ಸಬ್ಸಿಡಿ ಬಗ್ಗೆ ತಿಳಿದುಕೊಳ್ಳೋಣ. ಭಾರತ ಒಂದು ಕೃಷಿಯಾಧಾರಿತ ದೇಶವಾಗಿದ್ದು , ಕೃಷಿ ದೇಶದ ಆರ್ಥಿಕತೆಯಲ್ಲಿ ಬಹಳ ಮುಖ್ಯವಾದ ಭಾಗವನ್ನು ನಿರ್ವಹಿಸುತ್ತದೆ . ಕೇಂದ್ರ ಮತ್ತು ರಾಜ್ಯ ಸರ್ಕಾರವು ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ರೈತರಿಗೆ ಬೆಳೆಗೆ ಹೆಚ್ಚಾಗಿ ನೀರಿನ ಅವಶ್ಯಕತೆ ಇರುತ್ತದೆ. ಹಾಗೂ ನೀರಿನ ಬಳಕೆಯು ಬಹಳ ಮುಖ್ಯ ಆದ ಕಾರಣ ರೈತರಿಗೆ ಕೃಷಿಯಲ್ಲಿ ನೀರು ನಿರ್ವಹಣೆಗಾಗಿ ತೋಟಗಾರಿಕೆ ಇಲಾಖೆಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಹನಿ ನೀರಾವರಿ ಗಾಗಿ ಅರ್ಜಿಗಳನ್ನು ಕರೆಯಲಾಗಿದೆ. ಸಾಮಾನ್ಯ ವರ್ಗದ ಹಾಗೂ SC ಮತ್ತು ST ರೈತರು ಈ ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಇದರ ಲಾಭ ಪಡೆಯಬಹುದು.
ಪಿಎಂ ಕಿಸಾನ್ 13ನೇ ಕಂತಿನ ಹಣ ಜಮಾ ಆಗುತ್ತದೆಯೋ ಇಲ್ಲವೋ ಎಂಬುದನ್ನು ತಿಳಿಯಿರಿ https://mahitisara.com/index.php/2023/01/27/pm-kisan-13th-instalement-update/
ಗದಗ ಜಿಲ್ಲೆ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ, ತೋಟಗಾರಿಕೆ ಬೆಳೆಗಾರರಿಗೆ ಹನಿನೀರಾವರಿ ಯೋಜನೆಗೆ ಸಹಾಯಧನ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳಾದ, ಹಣ್ಣು, ತರಕಾರಿ, ಹೂವು, ಪ್ಲಾಂಟೇಶನ್ ಬೆಳೆಗಳು, ಔಷಧಿ, ಸುಗಂಧ ಸಸ್ಯಗಳು ಹಾಗೂ ಸಾಂಬಾರು ಬೆಳೆಗಳಿಗೆ ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಗೆ ಸಹಾಯಧನವನ್ನು ನೀಡಲಾಗುತ್ತಿದೆ.
ಈ ಯೋಜನೆ ಪಡೆಯಲು ಇರಬೇಕಾದ ಅರ್ಹತೆ –
ಯೋಜನೆಗೆ ಫಲಾನುಭವಿ ಆಗಲು ರೈತರು ತಮ್ಮ ಫ್ರೂಟ್ ಐಡಿ ( fid ) ಕಡ್ಡಾಯವಾಗಿ ಹೊಂದಿರಬೇಕು
ರೈತರ ಹೊಲವು ತಮ್ಮ ಹೆಸರಿನಲ್ಲಿಯೇ ಇರಬೇಕು.
ಹೊಲದ ಪಹಣಿಯನ್ನು ಹೊಂದಿರಬೇಕು
ಹೊಲಕ್ಕೆ ನೀರಾವರಿ ಸೌಲಭ್ಯ ಇರಬೇಕು
ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ ಕಡ್ಡಾಯವಾಗಿ ಹೊಂದಿರಬೇಕು.
ರೈತರು ಕೆ ಕಿಸಾನ್ ವೆಬ್ಸೈಟ್ನಲ್ಲಿ ಹೆಸರು ನೋಂದಾಯಿಸಿರಬೇಕು.
ಹನಿ ನೀರಾವರಿ ಅರ್ಜಿ ಸಲ್ಲಿಸುವುದು ಹೇಗೆ?
ರೈತರು ಇದನ್ನು ಎರಡು ರೀತಿಯಾಗಿ ಸಲ್ಲಿಸಬಹುದು ಮೊದಲನೆಯದಾಗಿ ಅವರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು ಅಥವಾ ಆನ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.
ಸಾಮಾನ್ಯ ವರ್ಗದ ಜನರಿಗೆ ಈ ಯೋಜನೆಯಡಿ 2 ಹೇಕ್ಟರ್ ವರೆಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು 75% ರಷ್ಟು ಸಬ್ಸಿಡಿ ನೀಡಲಾಗುವುದು ಮತ್ತು SC, ST ವರ್ಗದ ರೈತರಿಗೆ
2 ಹೇ ವರೆಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಶೇಕಡ 9೦% ಸಹಾಯಧನವನ್ನು ನೀಡಲಾಗುವುದು.
ರೈತರು ಹೆಚ್ಚಿನ ಮಾಹಿತಿಯನ್ನು ತಿಳಿಯಲು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತೋಟೆಗಾರಿಕೆ ಇಲಾಖೆಯನ್ನು ಭೇಟಿ ನೀಡಬೇಕು.
ಮಾಹಿತಿ ಸಾರ ವಾಟ್ಸಪ್ ಗ್ರೂಪ್ ನಿರಂತರ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ https://chat.whatsapp.com/FA0PdNzN7gPBDMgjXsvVW9
It is good opportunity for farmers
I hve a bore well with 2 ekaers land and i dont have power supply i need solar supply for irrigation
Kabu