
ಎಲ್ಲ ರೈತ ಬಾಂಧವರಿಗೂ ನನ್ನ ನಮಸ್ಕಾರಗಳು, ಭಾರತದ ಆರ್ಥಿಕತೆಯಲ್ಲಿ ರೈತನ ಭಾಗವು ಮಹತ್ವರೂಪವನ್ನು ವಹಿಸುತ್ತದೆ. ದೇಶದ ಅಭಿವೃದ್ಧಿ ಕೃಷಿಯ ಅಭಿವೃದ್ಧಿಯಲ್ಲಿದೆ , ಸರಕಾರವು ಕೂಡ ಕೃಷಿಗೆ ಪ್ರಾಮುಖ್ಯತೆಯನ್ನು ಕೊಡುತ್ತಲೇ ಬಂದಿದೆ. ಹಾಗೂ ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿದೆ, ಅದರಲ್ಲಿ, ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯೂ ಕೂಡ ಒಂದು.
ಬೆಳೆ ಹಾನಿ ಪರಿಹಾರ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಿ https://mahitisara.com/index.php/2023/02/03/how-to-check-parihara-payment-status-in-mobile/
ಹಾಗಾದರೆ ಏನಿದು ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ? ಇದರಿಂದ ಏನು ಉಪಯೋಗ? ತಿಳಿಯೋಣ ಬನ್ನಿ
ಈ ಯೋಜನೆ ಅಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಟ್ರಾಕ್ಟರ್ ಅನ್ನು ಖರೀದಿಸಲು ಶೇಕಡ 50% ರಷ್ಟು ಸಬ್ಸಿಡಿ ನೀಡಲಾಗುವುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಆನ್ಲೈನ್ ಮತ್ತು ಆಫ್ಲೈನ್ ಎರಡು ಕಾರ್ಯವಿಧಾನಗಳು ಲಭ್ಯವಿದೆ.
ಟ್ರ್ಯಾಕ್ಟರ್ ಸಬ್ಸಿಡಿ ಪಡೆಯಲು ಬೇಕಾದ ಅರ್ಹತೆಗಳು.
- ಅರ್ಜಿದಾರರು ಖಾಯಂ ಭಾರತದ ನಿವಾಸಿಗಳಾಗಿರಬೇಕು
- ಅರ್ಜಿದಾರರ ವಯಸ್ಸು 18 ರಿಂದ 60ರ ಒಳಗಿರಬೇಕು
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
- ಕುಟುಂಬದ ಆದಾಯ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
*ಅರ್ಜಿದಾರರ ಹೆಸರಲ್ಲಿ ಜಮೀನು ಇರಬೇಕು. - ಅರ್ಜಿದಾರರು ಇತರೆ ಯಾವುದೇ ಆದಂತ ಸಬ್ಸಿಡಿಯ ಯೋಜನೆಗೆ ಫಲಾನುಭವಿ ಆಗಿರಬಾರದು.
- ಇದಲ್ಲದೆ, ಸಬ್ಸಿಡಿಗಾಗಿ ಅರ್ಜಿ ಸಲ್ಲಿಸುವ ರೈತರು ಕಳೆದ ಏಳು ವರ್ಷಗಳಲ್ಲಿ ಟ್ರ್ಯಾಕ್ಟರ್ ಖರೀದಿಸಿರಬಾರದು.
- ಸಬ್ಸಿಡಿ ಟ್ರಾಕ್ಟರುಗಳನ್ನು ಖರೀದಿಸಲು ಪ್ರತಿ ಕುಟುಂಬಕ್ಕೆ ಒಬ್ಬ ವ್ಯಕ್ತಿಯನ್ನು ಮಾತ್ರ ಅರ್ಹವೆಂದು ಪರಿಗಣಿಸಲಾಗುತ್ತದೆ ಎಂಬುದನ್ನು ಗಮನಿಸಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು
- ಆಧಾರ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್ - ಗುರುತಿನ ಪುರಾವೆ (ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಇತ್ಯಾದಿ)
- ಛಾಯಾಚಿತ್ರ (ಪಾಸ್ ಪೋರ್ಟ್ ಗಾತ್ರ)
- ಕಾನೂನುಬದ್ಧ ಖಾತೆ / ಹೊಂದಿರುವ ಭೂಮಿಯ ವಿವರಗಳು
ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ ಆನ್ಲೈನ್ ನೋಂದಣಿ ನಮೂನೆ.!
ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಗೆ ಅರ್ಜಿ ಸಲ್ಲಿಸಲು ನೋಂದಣಿ ಪ್ರಕ್ರಿಯೆಯು ಭಾರತ ಸರ್ಕಾರದ ಇತರ ಯೋಜನೆಗಳಿಗಿಂತ ಭಿನ್ನವಾಗಿ ಆನ್ ಲೈನ್’ನಲ್ಲಿ ಲಭ್ಯವಿಲ್ಲ. ಅರ್ಜಿ ಸಲ್ಲಿಸಲು ಮತ್ತು ಯೋಜನೆಯ ಫಲಾನುಭವಿಯಾಗಲು ಬಯಸುವ ಎಲ್ಲಾ ಅರ್ಹ ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ರಾಜ್ಯ ಮಟ್ಟದ ಕೃಷಿ ಇಲಾಖೆಗೆ ಭೇಟಿ ನೀಡಬಹುದು.
ಮಾಹಿತಿಸಾರ ವಾಟ್ಸಪ್ ಗ್ರೂಪ್ ದಿನನಿತ್ಯ ಇದೇ ರೀತಿ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.https://chat.whatsapp.com/FA0PdNzN7gPBDMgjXsvVW9