Spread the love

ಎಲ್ಲ ರೈತ ಬಾಂಧವರಿಗೆ ನಮಸ್ಕಾರಗಳು, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕೃಷಿಯು ಮುಖ್ಯವಾದ ಪಾತ್ರ ನಿಭಾಯಿಸುತ್ತದೆ, ಸರಕಾರವು ಕೂಡ , ಕೃಷಿಗೆ ಮಹತ್ವವನ್ನು ನೀಡುತ್ತಲೇ ಇದೆ . ತೋಟಗಾರಿಕೆ ಇಲಾಖೆಯಿಂದ 2022 ಮತ್ತು 23 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ತಂತ್ರಜ್ಞಾನ ಅಭಿಯಾನ ಯೋಜನೆಯ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಕಾರ್ಯಕ್ರಮ ಅಡಿಯಲ್ಲಿ ಕೃಷಿ ಯಂತ್ರೋಪಕರಣ ಖರೀದಿಸುವ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಂದ ಸಹಾಯ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಣೆ, ಕೂಡಲೇ ಅರ್ಜಿ ಸಲ್ಲಿಸಿ https://mahitisara.com/index.php/2023/01/13/free-tailor-machine-for-ladies/

ರೈತರು ಖರೀದಿಸುವ ಹೊಲಕ್ಕೆ ಬೇಕಾಗುವಂತಹ ಯಂತ್ರೋಪಕರಣಗಳಿಗೆ SC ಮತ್ತು ST ವರ್ಗದವರಿಗೆ, ಸಣ್ಣ ಮತ್ತು ಅತೀ ಸಣ್ಣ ಹಾಗೂ ಮಹಿಳಾ ಫಲಾನುಭವಿಗಳಿಗೆ ಶೇ.50 ರ ಸಹಾಯಧನ ಹಾಗೂ ಇತರೆ ವರ್ಗದ ಫಲಾನುಭವಿಗಳಿಗೆ ಶೇ.40 ರಷ್ಟು ಸಹಾಯಧನ ನೀಡಲು ನಿರ್ಧಾರ ಮಾಡಿದೆ. ಈ ಯೋಜನೆ ಅಡಿ ಫಲಾನುಭವಿ ಆಗಲು ಕೂಡಲೇ ತಮ್ಮ ತಮ್ಮ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಮತ್ತು ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

ಆಸಕ್ತ ತೋಟಗಾರಿಕೆ ಬೆಳೆಗಾರರು ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರವರ ಕಛೇರಿಗೆ ಸಂಪರ್ಕಿಸಬಹುದೆಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಹಾಯಧನ ಪಡೆಯಲು ಬೇಕಾಗುವ ಅಗತ್ಯ ದಾಖಲೆಗಳು
ರೈತರ ಜಮೀನಿನ ಪಹಣಿ
ಆಧಾರ್ ಕಾರ್ಡ್‌
ಬ್ಯಾಂಕ್ ಪಾಸ್ ಬುಕ್
ಪಹಣಿ ಜಂಟಿಯಾಗಿದ್ದರೆ ಒಪ್ಪಿಗೆ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು.
ರೈತರು ಫ್ರೂಟ್ಸ್ ಐಡಿ ಹೊಂದಿರಬೇಕು.
SC / ST / OBC ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
ರೈತರು ಯಾವ ಕೃಷಿ ಯಂತ್ರೋಪಕರಣಕ್ಕೆ ಅರ್ಜಿ ಸಲ್ಲಿಸುತ್ತಾರೋ ಆ ಅರ್ಜಿ ಹೊಂದಿರಬೇಕು.

ಯಂತ್ರೋಪಕರಣಗಳು
ಸಣ್ಣ ಟ್ರ್ಯಾಕ್ಟರ್
ಪವರ್ ಟಿಲ್ಲರ್
ಬಿತ್ತನೆ ಯಂತ್ರಗಳು
ಸಸ್ಯ ಸಂರಕ್ಷಣೆ ಮತ್ತು ಸಿಂಪರಣ ಯಂತ್ರಗಳು
ಭೂಮಿ ಸಿದ್ಧತೆಗೆ ಬೇಕಾಗುವ ಉಪಕರಣಗಳು
ಡೀಸೆಲ್ ಪಂಪ್ ಸೆಟ್ಸ್ ಮತ್ತು ಮುಂತಾದವುಗಳು

ಹಾಗಾದರೆ ಈ ಯೋಜನೆಯ ಅರ್ಜಿ ಸಲ್ಲಿಸುವುದು ಹೇಗೆ?
* ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬೇಕು.
* ರೈತರು ಸಹಾಯಧನ ಪಡೆಯಲು ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಅರ್ಜಿಯನ್ನು ಸಲ್ಲಿಸುವುದು ಹಾಗೂ ಕೃಷಿ ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
* ಅರ್ಜಿದಾರರು ಕೃಷಿ ಇಲಾಖೆಯ ಗಮನಕ್ಕೆ ಬರದೇ ಪೂರ್ವಾನುಮತಿ ಪಡೆಯದೆ ಹೋದರೆ ಈ ಯೋಜನೆಗೆ ಅವರು ಅರ್ಹರಾಗಿರುವುದಿಲ್ಲ.
* ಇನ್ನೊಂದು ಮುಖ್ಯ ವಿಷಯವೆಂದರೆ ಒಮ್ಮೆ ರೈತ ಉಪಕರಣವನ್ನು ಸಹಾಯಧನದಲ್ಲಿ ಪಡೆದರೆ ಮುಂದೆ ಅದೇ ಉಪಕರಣವನ್ನು ಮುಂದಿನ ಏಳು ವರ್ಷಗಳವರೆಗೆ ಯಾವುದೇ ಸಹಾಯಧನದ ಅಡಿಯಲ್ಲಿ ಪಡೆಯಲು ಅವಕಾಶ ಇರುವುದಿಲ್ಲ.
*ಈ ಯೋಜನೆಯಲ್ಲಿ ಫ್ರೂಟ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡ ಹಾಗೂ ಕೆ ಕಿಸಾನ್ ಮೂಲಕ ಅರ್ಜಿ ಸಲ್ಲಿಸುವ ರೈತರು ಮಾತ್ರ ಈ ಎಲ್ಲ ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಮಾಹಿತಿ ಸರ್ ವಾಟ್ಸಪ್ ಗ್ರೂಪ್ , ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ನೀವು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/JnxYHrLdp063426HBuSr4G

Leave a Reply

Your email address will not be published. Required fields are marked *