
ಆತ್ಮೀಯ ರೈತ ಬಾಂಧವರಿಗೆ ನಮಸ್ಕಾರಗಳು. ಈ ಲೇಖನದಲ್ಲಿ ರೈತರಿಗೆ ಉಪಯುಕ್ತವಾದ ಕೇಂದ್ರ ಸರ್ಕಾರದ ‘5 ಮಹತ್ವದ ಯೋಜನೆ’ಗಳ ಬಗ್ಗೆ ತಿಳಿದುಕೊಳ್ಳೋಣ.
ರೈತರಿಗೆ ಆರ್ಥಿಕ ನೆರವು ನೀಡಲು ಸರ್ಕಾರವು ಅನೇಕ ಯೋಜನೆಗಳನ್ನ ನಡೆಸುತ್ತದೆ. ಇದರಲ್ಲಿ ನಗದು ಸಾಲದ ಲಾಭ ಲಭ್ಯವಿದೆ. ಕೆಲವು ಯೋಜನೆಗಳಲ್ಲಿ, ವಿಮೆಯ ಪ್ರಯೋಜನವನ್ನು ಸಹ ನೀಡಲಾಗುತ್ತದೆ.
ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರವು ಅನೇಕ ಸರ್ಕಾರಿ ಯೋಜನೆಗಳನ್ನು ನಡೆಸುತ್ತಿದೆ. ಆದರೆ ಈ ಯೋಜನೆಗಳು ರೈತರಿಗೆ ತಲುಪುವಲ್ಲಿ ವಿಳಂಬವಾಗಿವೆ.
ಈ ಯೋಜನೆಗಳ ಅಡಿಯಲ್ಲಿ, ರೈತರಿಗೆ ಆರ್ಥಿಕ ಸಹಾಯದ ಜೊತೆಗೆ ಬೆಳೆ ವಿಮೆ ಮತ್ತು ಇತರ ಸೌಲಭ್ಯಗಳ ಪ್ರಯೋಜನವನ್ನು ನೀಡಲಾಗುತ್ತದೆ. ರೈತರಿಗೆ ಅತ್ಯಂತ ಉಪಯುಕ್ತವಾದ ಐದು ಯೋಜನೆಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಕೇಂದ್ರ ಸರ್ಕಾರದ ‘5 ಮಹತ್ವದ ಯೋಜನೆ’ಗಳು
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Yojana) :
2018ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿಗಳನ್ನ ನೀಡಲಾಗುತ್ತದೆ. ಈ 6 ಸಾವಿರ ಮೊತ್ತವನ್ನ ನಾಲ್ಕು ತಿಂಗಳ ಅಂತರದಲ್ಲಿ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ರೈತರಿಗೆ ಪ್ರತಿ ಕಂತಿನಲ್ಲಿ ಎರಡು ಸಾವಿರ ರೂಪಾಯಿ ನೀಡಲಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು, ನೀವು PM ಕಿಸಾನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸರಿಯಾಗಿದ್ದರೆ ಯೋಜನೆಯ ಲಾಭವನ್ನ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟ್ ಗೆ ಭೇಟಿ ನೀಡಿ.https://pmkisan.gov.in/
ಕಿಸಾನ್ ಕ್ರೆಡಿಟ್ ಕಾರ್ಡ್(Kisan Credit Card) :
ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು 2020 ರಲ್ಲಿ ಪರಿಚಯಿಸಲಾಯಿತು. ಕೆಸಿಸಿ ಅಡಿಯಲ್ಲಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಇದರಿಂದ ಅವರು ತಮ್ಮ ಬೆಳೆಯ ಬಿತ್ತನೆ ಮತ್ತು ಇತರ ಖರ್ಚುಗಳನ್ನ ನಿರ್ವಹಿಸಬಹುದು. ಮತ್ತು ಬೆಳೆ ಮಾರಿದಾಗ ಸಾಲದ ಮೊತ್ತವನ್ನ ಜಮಾ ಮಾಡಬಹುದು. ಇದರ ಅಡಿಯಲ್ಲಿ, ದೇಶದ ಯಾವುದೇ ರೈತರು ಅರ್ಜಿ ಸಲ್ಲಿಸಬಹುದು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (Fasal Bima Yojana) :
ಈ ಯೋಜನೆಯು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಇದನ್ನು 2016 ರಲ್ಲಿ ಪರಿಚಯಿಸಲಾಯಿತು. ಈ ಯೋಜನೆಯ ಅಡಿಯಲ್ಲಿ ರೈತರಿಗೆ ಅತ್ಯಂತ ಕಡಿಮೆ ಪ್ರೀಮಿಯ್ಂ ನ ಠೇವಣಿ ಮಾಡಿದ ಮೇಲೆ ಬೆಳೆ ವಿಮೆಯ ಪ್ರಯೋಜನವನ್ನು ನೀಡಲಾಗುತ್ತದೆ ಮತ್ತು ವಿಪತ್ತಿನಿಂದ ಹಾನಿಗೊಳಗಾದ ಬೆಳೆಗೆ ರಕ್ಷಣೆ ನೀಡಲಾಗುತ್ತದೆ. ವಿಕೋಪದಿಂದ ಹಾನಿಗೊಳಗಾದ ಬೆಳೆಗಳಿಗೆ ಸರ್ಕಾರವು ರೈತರಿಗೆ ಆರ್ಥಿಕ ಸಹಾಯವನ್ನು ನೀಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟ್ ಗೆ ಭೇಟಿ ನೀಡಿ.
ಪ್ರಧಾನ ಮಂತ್ರಿ ಕಿಸಾನ್ ಮಂಧನ್ ಯೋಜನೆ (PM Mandhan Yojana) :
60 ವರ್ಷಗಳ ನಂತರ ರೈತರಿಗೆ ಪಿಂಚಣಿ ಪ್ರಯೋಜನವನ್ನ ನೀಡಲು ಈ ಯೋಜನೆಯನ್ನ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ, 18 ರಿಂದ 40 ವರ್ಷ ವಯಸ್ಸಿನ ಯಾವುದೇ ರೈತರು ಅರ್ಜಿ ಸಲ್ಲಿಸಬಹುದು. ಪ್ರತಿ ತಿಂಗಳು 55 ರಿಂದ 200 ರೂಪಾಯಿ ಪ್ರೀಮಿಯಂ ಠೇವಣಿ ಮಾಡಿದ್ರೆ, 60 ವರ್ಷದ ನಂತ್ರ 3000 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಪಿಂಚಣಿ ಲಾಭ ಪಡೆಯಲು ಈ ಕಂತನ್ನು 20 ವರ್ಷಗಳವರೆಗೆ ಠೇವಣಿ ಇಡಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟ್ ಗೆ ಭೇಟಿ ನೀಡಿ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (Pradhan Mantri Krishi Sinchai Yojana) :
2015ರಲ್ಲಿ ಕೇಂದ್ರ ಸರ್ಕಾರವು ‘ಹರ್ ಖೇತ್ ಕೋ ಪಾನಿ’ ಹೆಸರಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಪ್ರಾರಂಭಿಸಿತು. ನೀರಾವರಿಯೊಂದಿಗೆ ಸಾಗುವಳಿ ಪ್ರದೇಶವನ್ನ ವಿಸ್ತರಿಸಲು, ನೀರಿನ ವ್ಯರ್ಥವನ್ನ ಕಡಿಮೆ ಮಾಡಲು ಮತ್ತು ನೀರಿನ ಬಳಕೆಯ ದಕ್ಷತೆಯನ್ನ ಸುಧಾರಿಸಲು ಯೋಜನೆಯನ್ನ ಜಾರಿಗೊಳಿಸಲಾಗಿದೆ. ಅಧಿಕೃತ ವೆಬ್ ಸೈಟ್ ಪ್ರಕಾರ, ಈ ಯೋಜನೆಯು 2021-2022 ವರ್ಷಕ್ಕೆ ಸೂಕ್ಷ್ಮ ನೀರಾವರಿ ಅಡಿಯಲ್ಲಿ ಅನ್ವಯಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟ್ ಗೆ ಭೇಟಿ ನೀಡಿ.