
ಹೊಸ ವರ್ಷ ಶುರುವಾಗುತ್ತಿದ್ದಂತೆ ಸರಕಾರವು ಎಲ್ಲ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ, ಪ್ರಸಕ್ತ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರಲ್ಲಿ 45906 ರೈತರಿಗೆ 29.64 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಹಣ ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಹೌದು, ಸರಕಾರವು ಪ್ರಸಕ್ತ 2022 ರ ಮುಂಗಾರು ಹಂಗಾಮಿನ ಆಗಸ್ಟ್ ಮತ್ತು ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸುರಿದ ತೀವ್ರ ಮಳೆಯಿಂದ ಹಾಳಾದ ಎಲ್ಲಾ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಸ್ಥಳೀಯ ನಿರ್ಧಿಷ್ಟ ವಿಕೋಪದಡಿ ಸುಮಾರು 45,906 ರೈತರಿಗೆ ಈಗಾಗಲೇ 29.64 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ವಿಮಾ ಸಂಸ್ಥೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಗೆ ಯಾವ ಯಾವ ತಾಲೂಕಿನ ರೈತರಿಗೆ ಹಣ ಮುಟ್ಟಿದೆ ಎಂದು ನೋಡಿದರೆ, ಅಫಜಲ್ಪುರ ತಾಲೂಕಿನ 3473 ರೈತರಿಗೆ 2.87 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಆಳಂದ ತಾಲೂಕಿನ 12,599 ರೈತರಿಗೆ 8.15 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಹಣ ಬಿಡುಗಡೆಯಾಗಿದೆ. ಚಿಂಚೋಳಿ ತಾಲೂಕಿನ 8231 ರೈತರಿಗೆ 3.38 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಚಿತ್ತಾಪುರ ತಾಲೂಕಿನ 2387 ರೈತರಿಗೆ 1.67 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಜೇವರ್ಗಿ ತಾಲೂಕಿನ 642 ರೈತರಿಗೆ 0.77 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಅದೇ ರೀತಿ ಕಲಬುರಗಿ ತಾಲೂಕಿನ 4019 ರೈತರಿಗೆ 3.17 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಕಾಳಗಿ ತಾಲೂಕಿನ 5072 ರೈತರಿಗೆ 2.43 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಕಮಲಾಪುರ ತಾಲೂಕಿನ 2549 ರೈತರಿಗೆ 1.53 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಅದೇ ರೀತಿ ಸೇಡಂ ತಾಲೂಕಿನ 6275 ರೈತರಿಗೆ 4.90 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಶಹಾಬಾದ್ ತಾಲೂಕಿನ 424 ರೈತಿರಗೆ 0.36 ಕೋಟಿ ರೂಪಾಯಿ ಹಾಗೂ ಯಡ್ರಾಮಿ ತಾಲೂಕಿನ 235 ರೈತರಿಗೆ 0.36 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ.
ಸುಮಾರು 45906 ರೈತರಿಗೆ ಈಗಾಗಲೇ ಬೆಳೆ ವಿಮೆ ಜಮ ವಾಗಿದ್ದು ಇದರಲ್ಲಿ ಪ್ರಮುಖವಾಗಿ 40,596 ರೈತರ ತೊಗರಿ ಬೆಳೆ ಹಾನಿಗೆ 27.31 ಕೋಟಿ ರೂಪಾಯಿ ಬಿಡುಗಡೆಯಾಗಿದೆ.2684 ರೈತರ ಹೆಸರು ಬೆಳೆ ಹಾನಿಗೆ 1.06ಕೋಟಿ ರೂಪಾಯಿ ಹಾಗೂ 2280 ರೈತರ ಉದ್ದು ಬೆಳೆ ಹಾನಿಗೆ 1.02 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
ಬೆಳೆ ವಿಮೆ ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ಚೆಕ್ ಮಾಡಿ
https://www.samrakshane.karnataka.gov.in/publichome.aspx
ರೈತರು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ಮೇಲ್ಕಂಡಂತ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಮುಖಪುಟ ಓಪನ್ ಆಗುತ್ತದೆ. ಅಲ್ಲಿ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ನಲ್ಲಿ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಮೊಬೈಲ್ ನಂಬರ್ ಹಾಗೂ ಕ್ಯಾಪ್ಚ್ಯಾ ಕೋಡ್ ಹಾಕಿ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.
ರೈತರಿಗೆ ಯಾವುದೇ ತೊಂದರೆ ಆದಲ್ಲಿ, ಅವರು ಕೂಡಲೇ ಸಹಾಯವಾಣಿ ನಂಬರಿಗೆ ಕರೆ ಮಾಡಿ ಬೆಳೆ ವಿಮೆಯ ಮಾಹಿತಿ ಅನ್ನು ಪಡೆಯಬಹುದು.
ಕಲಬುರಗಿ ಜಿಲ್ಲೆಯ ರೈತರು ಬೆಳೆ ವಿಮೆ ಕುರಿತಂತೆ ಯೂನಿವರ್ಸಲ್ ಸ್ಯಾಂಪೋ ಉಚಿತ ಸಹಾಯವಾಣಿ 1800 200 5142 ಗೆ ಕರೆ ಮಾಡಬಹುದು. ನಿಮ್ಮ ತಾಲೂಕು ವಿಮಾ ಪ್ರತಿನಿಧಿಗಳ ನಂಬರ್ ಸಹ ಪಡೆದುಕೊಂಡು ನಿಮ್ಮ ಬೆಳೆ ವಿಮೆಯ ಸ್ಟೇಟಸ್ ಕೇಳಬಹುದು.
ಮತ್ತು ಇತರ ಜಿಲ್ಲೆಯ ರೈತರು ತಮ್ಮ ಬೆಳೆ ವಿಮೆ ಗೆ ಸಂಬಂಧಿಸಿದಂತ ತೊಂದರೆ ಇದ್ದರೆ ಅವರು ಈ ಕೆಳಗೆ ಕಂಡಂತ ಸಹಾಯವಾಣಿಗೆ ಕರೆ ಕರೆ ಮಾಡಬಹುದು. ಬೆಳೆ ವಿಮೆ ಸಹಾಯವಾಣಿ ನಂಬರ್ 18001801551 ಕರೆ ಮಾಡಬಹುದು.