
ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು ನೆನ್ನೆ ನಡೆದಂತ ಬಜೆಟ್ ನಲ್ಲಿ ಕೃಷಿ ಇಲಾಖೆಗೆ ಏನೆಲ್ಲಾ ಸಿಕ್ಕಿದೆ ಎಂದು ತಿಳಿದುಕೊಳ್ಳೋಣ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1 ರಂದು 2023 ಮತ್ತು 2024 ನೇ ಆರ್ಥಿಕ ವರ್ಷದ ಬಜೆಟ್ ಮಂಡಿಸಿ ಕೃಷಿ ಇಲಾಖೆಯ ಕುರಿತು ಒಂದಷ್ಟು ಘೋಷಣೆ ಮಾಡಿದರು.
ಹಾಗಾದರೆ ನಿನ್ನೆ ನಡೆದ ಬಜೆಟ್
ನಲ್ಲಿ ಕೃಷಿ ವಲಯಕ್ಕೆ ಏನೆಲ್ಲಾ ಸೌಲಭ್ಯ ಸಿಕ್ಕಿತು ?
ಕೃಷಿ ವೇಗವರ್ಧಕ ನಿಧಿ.
ಗ್ರಾಮೀಣ ಪ್ರದೇಶದ ಯುವ ಉದ್ಯಮಿಗಳಿಂದ ಕೃಷಿ-ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಿ , ರೈತರು ಎದುರಿಸುತ್ತಿರುವ ತೊಂದರೆಗಳನ್ನು, ಹೊಸ ಕ್ರಮಗಳಿಂದ ಸಹಾಯ ಮಾಡುವುದು ಈ ನಿಧಿಯ ಉದ್ದೇಶವಾಗಿದೆ.
ಗಂಗಾ ಕಲ್ಯಾಣ ಯೋಜನೆ ಅಡಿ , ನಿಮ್ಮ ಹೊಲದಲ್ಲಿ ಉಚಿತವಾಗಿ ಬೋರ್ವೆಲ್ ಹಾಕಿಸಿಕೊಳ್ಳಿ https://mahitisara.com/index.php/2023/01/15/ganga-kalyana-scheme-free-borewell-for-minority-people/
ಮೀನುಗಾರಿಕೆ
ಆಧುನಿಕ ಬೇಸಾಯದಲ್ಲಿ ರೈತರು ಹೆಚ್ಚಾಗಿ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಗಮನದಲ್ಲಿಟ್ಟುಕೊಂಡು ಕೃಷಿ ಸಾಲದ ಗುರಿಯನ್ನು ರೂ.20 ಟ್ರಿಲಿಯನ್‌ಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಕೃಷಿ ಸಾಲ
ಹಿಂದಿನ ವರ್ಷ ಸರ್ಕಾರವು 2022-23 ಹಣಕಾಸು ವರ್ಷದಲ್ಲಿ ಕೃಷಿ ಸಾಲದ ಗುರಿ ರೂ.16.50 ಟ್ರಿಲಿಯನ್‌ನಿಂದ ರೂ.18 ಟ್ರಿಲಿಯನ್‌ಗೆ ಏರಿಕೆ ಮಾಡಿದ್ದೇವೆ.
ನೈಸರ್ಗಿಕ ಕೃಷಿಗೆ ಪ್ರೋತ್ಸಾಹ
ಸರ್ಕಾರವು ಸುಮಾರು 10 ಮಿಲಿಯನ್ ರೈತರನ್ನು ನೈಸರ್ಗಿಕ ಕೃಷಿ ಮಾಡಲು ಪ್ರೋತ್ಸಾಹಿಸುತ್ತದೆ ಎಂದು ಅವರು ವಿವರಿಸಿದರು.
ಮಿಲ್ಲೆಟ್ಸ್ ಗೆ ಪ್ರೋತ್ಸಾಹ
ಭಾರತವು ರಾಗಿ ಬೆಳೆಯನ್ನು ಪ್ರೋತ್ಸಹ ಗೊಳಿಸಲು , ಮತ್ತು ಅದರ ಪೌಷ್ಟಿಕಾಂಶ, ಆಹಾರ ಭದ್ರತೆ ಮತ್ತು ರೈತರ ಕಲ್ಯಾಣದ ಕುರಿತು ಮೋದಿ ಮಾತನಾಡಿದರು.
ತೋಟಗಾರಿಕೆ ಇಲಾಖೆಯಲ್ಲಿ ಆತ್ಮ ನಿರ್ಬಾರ್ ಸ್ವಚ್ಛ ಸಸ್ಯ ಕಾರ್ಯಕ್ರಮ
2200 ಕೋಟಿಗು ಅಧಿಕ ಬಂಡವಾಳ ಇಲಾಖೆಗೆ ನೀಡಲಿದ್ದು, ರೋಗ ಮುಕ್ತ ಗುಣಮಟ್ಟದ ನಾಟಿ ಸಾಮಗ್ರಿಗಳನ್ನು ಹೆಚ್ಚಿಸಲು ಈ ಆಯೋಜನೆ ಮಾಡಿದೆ.
ಮಾಹಿತಿಸಾರ ವಾಟ್ಸಪ್ ಗ್ರೂಪ್ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ https://chat.whatsapp.com/FA0PdNzN7gPBDMgjXsvVW9
👌👌
ಸೂಪರ್
ನಾವೂ ಹಡಗಲಿ ತಾ ವಿಜಯನಗರ ಜಿ ಬೀರ ಬ್ಬಿ ಗ್ರಾಮದ ಬಡ ರೈತ