
ಎಲ್ಲ ರೈತರಿಗೂ ನನ್ನ ನಮಸ್ಕಾರಗಳು, ನೆಟೆ ರೋಗ ಬಂದು ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿತ್ತು ಇದರಿಂದ ರೈತ ಬಹಳ ಕಷ್ಟ ಅನುಭವಿಸುತ್ತಿದ್ದ. ಆದರೆ ತೊಗರಿ ಬೆಳೆಗೆ ಸಂಭವಿಸಿದ ಹಾನಿಯನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ರಾಜ್ಯ ಸರ್ಕಾರ ರೈತನಿಗೆ ನೆರವಾಗಲೆಂದು ಪರಿಹಾರ ಘೋಷಣೆ ಮಾಡಿದೆ.
ಪಿ ಎಂ ಕಿಸಾನ್ 13ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗುತ್ತೋ ಇಲ್ಲವೋ ಚೆಕ್ ಮಾಡಿ https://mahitisara.com/index.php/2023/01/27/pm-kisan-13th-instalement-update/
ಕಲಬುರಗಿ, ಬೀದರ್ ಹಾಗೂ ಯಾದಗಿರಿ ಈ ಮೂರು ಜಿಲ್ಲೆಯ ರೈತರು ತೊಗರಿ ಬೆಳೆಯು ನೆಟೆ ರೋಗದಿಂದ ಹಾಳಾಗಿದ್ದಕ್ಕೆ ಬಹಳ ತೊಂದರೆಯಲ್ಲಿದ್ದರೂ . ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಉದಾರಣೆ ಕೂಡ ಉಂಟು. ಇದನ್ನು ಪರಿಗಣಿಸಿ ಎಚ್ಚೆತ್ತ ರಾಜ್ಯ ಸರ್ಕಾರ, ಕೊನೆಗೂ ಪರಿಹಾರ ಘೋಷಿಸಿದೆ. ತೊಗರಿ ಬೆಳೆಗೆ ಸಂಭವಿಸಿದ ಹಾನಿಯನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ಗರಿಷ್ಠ 2 ಹೆಕ್ಟೇರ್ಗೆ ಸೀಮಿತಗೊಳಿಸಿ 10,000 ರೂಪಾಯಿ ಪರಿಹಾರ ಘೋಷಿಸಿದೆ. ಇದರ ಬಗ್ಗೆ ಸ್ವತಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.
ಜನವರಿ 24ರಂದು ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯೊಂದರಲ್ಲಿ ಈ ತೀರ್ಮಾನ ಮಾಡಲಾಯಿತು. ತೊಗರಿ ಬೆಳೆ ಹಾನಿಯನ್ನು 2 ಹೆಕ್ಟೇರ್ಗೆ ಸೀಮಿತಗೊಳಿಸಿ 10,000 ರೂಪಾಯಿ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇನ್ನು ನೆಟೆ ರೋಗ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಬೆಳೆ ಪರಿಹಾರ ಮೊತ್ತವು 223 ಕೋಟಿ ರೂಪಾಯಿಗಳಷ್ಟು ಆಗಬಹುದು ಎಂದು ಅಂದಾಜು ಮಾಡಲಾಯಿತು.
ಅಕಾಲಿಕ ಮಳೆ ಹಾಗೂ ಮೋಡದ ವಾತಾವರಣದಿಂದಾಗಿ ಬೀದರ್, ಕಲಬುರಗಿ ಹಾಗೂ ಯಾದಗಿರಿಯಲ್ಲಿ ಜಿಲ್ಲೆಗಳಲ್ಲಿ ತೊಗರಿ ಬೆಳೆಗೆ ನೆಟೆ ರೋಗ ಬಾಧೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಇದರಿಂದ ರೈತ ಕಂಗಾಲಾಗಿದ್ದ. ಈ ಬಗ್ಗೆ ಸರ್ಕಾರವು ಪರಿಹಾರ ನೀಡಬೇಕೆಂದು ಈ ಮೂರು ಜಿಲ್ಲೆಯ ರೈತರು ನಿರಂತರವಾಗಿ ಪ್ರತಿಭಟನೆಗಳನ್ನು ಮಾಡುತ್ತಲೇ ಇದ್ದರು . ಆದರೂ ಸರಕಾರ ಯಾವುದೇ ಕ್ರಮಕೈಗೊಂಡಿರಲಿಲ್ಲ. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೆಲವು ರೈತರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದು ಉಂಟು . ಅಲ್ಲದೇ ವಿಪಕ್ಷಗಳಿಂದ ಸಹ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಇದರಿಂದ ಎಚ್ಚತ್ತ ಬೊಮ್ಮಾಯಿ ಸರ್ಕಾರ ಕೊನೆಗೆ ಪರಿಹಾರ ಘೋಷಿಸಿದೆ. ಆದ್ರೆ, ಆ ಪರಿಹಾರ ಸಂತ್ರಸ್ತ ರೈತರಿಗೆ ತಲುಪ್ಪುತ್ತೋ? ಎನ್ನುವುದನ್ನು ಕಾದುನೋಡಬೇಕಿದೆ. ಇನ್ನು ಈ ಪರಿಹಾರ ರೈತ ಹಾಕಿದ್ದ ಬಂಡಾವಳ ನಷ್ಟ ಭರಿಸುತ್ತಾ ಎನ್ನುವುದು ಮುಂದಿರುವ ಪ್ರಶ್ನೆ.
ಮಾಹಿತಿ ಸಾವಿರಾ ವಾಟ್ಸಪ್ ಗ್ರೂಪ್ ಇದೇ ರೀತಿ ನಿರಂತರ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ https://chat.whatsapp.com/FA0PdNzN7gPBDMgjXsvVW9